mood ಮೂಡಿ ಬಂದಾಗ

Tuesday, August 7, 2012

ಬೇಜಾರು


ಥೂ...ಬೇಜಾರಿಗೆ ಟೆಮ್ ಸೆನ್ಸಿಲ್ಲ

ಬೇಡ್ದಿರ್ವಾಗ್ಲೆ ಬರ್ತದೆ.
ಅಂದು,ಇಂದು ಎಂದ್ಕೊಂಡು
ನೆಮ್ದಿನ್ ಹಾಳ್ಮಾಡ್ತದೆ.

ಮ್ಯಾಲಿರೊ ಗೋಡೆನ

ಏಷ್ಟು ಬಾರಿ ನೋಡೋಣ
ಒಂದ್ ಇಂಚಿನ ಗಡ್ಡನ
ಏಷ್ಟು ಸಾರಿ ಕೆರಿಯೋಣ.

ಎನ್ಲಾ.. ಬೇಜಾರು??

ನೀ ಓಳ್ಳೆ ಅವ್ವನಿಗೆ ಹುಟ್ಟಿಲ್ವಾ?
ಕಾಟ ಕೊಡೋದು ಬುಟ್ರೆ
ಬೇರೆ ಕೆಲ್ಸ ಬರಕಿಲ್ವಾ?

ಅಯ್ಯೋ...ಯಾಕೀ ಬೇಜಾರಿಗೆ

ಬೇಜಾರೆ ಆಗಲ್ವಾ???
ನನ್ನ ಬುಟು ಬೇಜಾರು
ಬೇರೆವ್ರತಾವ ಹೋಗಲ್ವಾ??
                                          ವೆಂ.ಪ.ತನಯ

Friday, June 8, 2012

ಕನ್ನಡಿ:-




ಒರಗಿ ಒರಗಿ ಗೋಡೆಗೆ,
ಬೆನ್ನು ನೋವು ಬಂದಿದೆ. 
ನಿಂತೂ ನಿಂತೂ ದೇಹಕೆ,
ಜಡ ಅಪ್ಪಿ ಕೊಂಡಿದೆ.

ನನ್ನ ಒಡೆಯ ಸರಿಯಿಲ್ಲ,
ತಲೆಕೆಟ್ಟ ಹುಚ್ಚನು.
ಅಂಗಿ, ಭಂಗಿಯ ಬದಲಿಸಿ,
ನನ್ನ ಮುಂದೆ ನಿಲ್ಲುವನು.

ಅವನಲಿರೋ ದರ್ಪಣ ಬಿಟ್ಟು,
ನನ್ನ ನೋಡುತಾ ನಿಲ್ಲುವನು.
ಬಣ್ಣ ಬಣ್ಣ ಬಟ್ಟೆ ತೊಟ್ಟು,
ದರ್ಪದಿ ಹಿಗ್ಗುವನು..

ನನಗೂ ಒಬ್ಬ ಸಖಿಯಿದ್ದಾಳೆ,
ಹೇಳಲಾಗದ ಅಂದವು .
ನನ್ನ ಮುಂದಿರುತ್ತಾಳೇ,
ಅವಳ ಹೆಸರು ಬಿಂಬವು.

ಇದು ಒಂದು ಸತ್ಯ 
ಕಥೆ,
ಇದಕೆ ಬೇಕೆ ಮುನ್ನುಡಿ ?
ಹೇಳಬಹುದು ನಾನು ಇಷ್ಟೇ,
ನನ್ನ ಹೆಸರು "ಕನ್ನಡಿ".....

ವೆಂ.ಪ.ತನಯ

Tuesday, May 22, 2012

ನೀ ಸುತ್ತಿರುವ ಸರಪಳಿ....




ನೇತು ಹಾಕುವೆ ಭೂತವೆ 
ನಿನ್ನ ವರ್ತಮಾನದ ಕುಣಿಕೆಗೆ, 
ತರುವಾಯ ಭವಿಷ್ಯದಲ್ಲಿ ಬಂದು
ನೀ ನನ್ನ  ಕಾಡದಿರು...


ಬಿಗಿದಪ್ಪದಿರು ಧಿಟ್ಟ ಬಯಲಿನಲ್ಲಿ
ಸುಡದಿರು ಕೆಟ್ಟ ಬಿಸಿಲಿನಲ್ಲಿ,
ಬೇಸರದ ಅಟ್ಟವೇರಿ ಬೇಡುತ್ತಿದೆ 
ಬೇಸತ್ತ ಈ ಪುಟ್ಟ ಬಾವವು...


ಅವರಿಬ್ಬರಾರು? ನಿನ್ನ ಒಡಹುಟ್ಟಿದವರ
ನಿನ್ನೊಂದಿಗೆ ಬಂದೇ ಹೋಗುತ್ತಾರೆ,
ಅವಳೋ ನಗಿಸಿ ಅಳಿಸಿ ಹೋದರೆ
ಇವಳು ಅಳಸದೆ ಅಳಿಸಿ ಹೋಗುತ್ತಾಳೆ..


ನೀ ಸುತ್ತಿರುವ ಸರಪಳಿ 
ಹಿಂಡುತ್ತಿದೆ ಈ ಭಾವವ 
ಬೇಡುವೆ ದೇಹಿಯೆಂದು ನಿನ್ನಲಿ
ಉಳಿಸು ನನ್ನ ಜೀವವ...
                               -ವೆಂ.ಪ.ತನಯ    
   

Thursday, March 1, 2012

This is my first Short movie...

Saturday, November 20, 2010

ಸಾಯಲು ನಿಂತಿದೆ ಎಕಾಂತ



ಮಲಗಿ ಮಲಗಿ ಸಾಕಾಗಿದೆ
ನೆನಪಿನ ಜೊತೆಯಲಿ.
ಕನಸೇ ಸಂಗಾತಿಯ ಬಯಸುತ್ತಿದೆ
ಇನ್ನು ಮನಸಿನ ಮಾತೆಲ್ಲಿ?


ಕಾಣದ ಕೈ ಕರಿಯುತ್ತಿದೆ
ನಲುಮೆಯ ಊರಿಗೆ
ಭಾವದ ಬಂಡಿ ಹೊರಳುತ್ತಿದೆ
ನನ್ನವಳ ಕೇರಿಗೆ.


ಸಾಯಲು ನಿಂತಿದೆ ಎಕಾಂತ
ಪ್ರೀತಿಯ ಕುಣಿಕೇಲಿ.
ಸವಿ ನೆನೆಪುಗಳೆ ಜೀವಂತ
ಈ ಪ್ರೇಮಿಯ ಎದೇಲಿ. -ವೆ೦.ಪ.ತನಯ