mood ಮೂಡಿ ಬಂದಾಗ

Tuesday, January 26, 2010

ಯಾಕೋ ಗೊತ್ತಿಲ್ಲ




ನಿನ್ನ ಚೆಲುವು ನೋಡಿ ಒಲವು ಹುಟ್ಟೀದೆ ಯಾಕೊ ಗೊತ್ತಿಲ್ಲ
ತಂಗಾಳಿಯಾಗಿ ಎನ್ನ ಎದೆಗೆ ಅಪ್ಪಿದೆಯಲ್ಲ
ಬಾರದ ಬಯಕೆ ಮನಕ್ಕೆ ಬಂದಿದೆಯಲ್ಲ
ಇದು ಮೋಹವಲ್ಲ ಪ್ರೀತಿಯೆನ್ನಬಹುದೇ? ಯಾಕೋ ಗೊತ್ತಿಲ್ಲ


ಜೋರಾಗಿ ಚೀರಬೇಕೆನಿಸುತ್ತಿದೆ ನಿನ್ನ ಹೆಸರು ಯಾಕೋ ಗೊತಿಲ್ಲ
ಮೈಮರೆತು ನಿನ್ನ ಕೈ ಹಿಡಿಯಬೇಕೆನಿಸುತ್ತಿದೆಯಲ್ಲ
ಬಯಕೆಯ ಬುತ್ತಿಯಲ್ಲಿ ಕೈ ಸ್ಪರ್ಶಿಸುವುದು ಗೊತ್ತಿಲ್ಲ
ಮೋಹಬತ್ ಮುಗಿಲೇರಿ ನಿನ್ನ ಆಗಮನಕ್ಕೆ ಕಾಯುತಿದೆಯಲ್ಲ ಯಾಕೋ ಗೊತ್ತಿಲ್ಲ


ಗೋಳಾಡಿ ಎದೆ ಹೋಳಾಗಿದೆ ಯಾಕೊ ಗೊತ್ತೀಲ್ಲ
ವಿರಹದ ಮುಳ್ಳು ಎದೆಗೆ ಚುಚ್ಚಿದೆಯಲ್ಲ
ಮನ ಪುನಃ ಸೋತಿದೆಯಲ್ಲ, ಜೊತೆಯಲ್ಲಿದ್ದರು
ಏಕಾಂಗಿ ಎನಿಸುತ್ತಿದೆಯಲ್ಲ, ಯಾಕೊ ಗೊತ್ತಿಲ್ಲ?


-ವೆ೦.ಪ.ತನಯ