mood ಮೂಡಿ ಬಂದಾಗ

Thursday, September 9, 2010

ಮತ್ತದೇ ನೆನಪುಗಳು:-



ಮತ್ತೆ ಮತ್ತೆ ಮೂಡಿದೆ,
ಹೊತ್ತು ಗೊತ್ತು ಅರಿಯದೆ,
ನನ್ನ ಸುತ್ತ ಸುತ್ತಿದೆ,
ಮತ್ತದೇ ನೆನಪುಗಳು.


ಬಲು ದಿನದ ಹಿಂದಿನ,
ಕಡೆಗೆ ಮನದ ಪಯಣ,
ಸುಖದಿನಕ್ಕೆ ಪಾದಾರ್ಪಣ,
ಮತ್ತದೇ ನೆನಪುಗಳು.


ಬಾಳೆಂಬ ಆಟದಿ,
ಸುಖವೊಂದು ಅವಧಿ,
ನೆನಪಿಗಾಗಿ ನಿಗದಿ,
ಮತ್ತದೇ ನೆನಪುಗಳು.


ಮಾತು ಮರೆತ ಮೌನದ,
ಮೌನ ಮರೆತ ಮಾತಿನ.
ಮಾತು ಮೌನಗಳ ನಡುವೆ
ಮತ್ತದೆ ನೆನಪುಗಳು.


ಹೇಳಲೇನು ಕಾರಣ?
ಹೇಳಿ ಕೇಳಿ ಜೀವನ.
ಅಂದ ಚಂದ ಬಂಧನ.
ಮತ್ತದೇ ನೆನಪುಗಳು