mood ಮೂಡಿ ಬಂದಾಗ

Thursday, June 17, 2010

ಸರೀ ಸ್ವಲ್ಪ ಸಹೋದರ:-


ಸರೀ ಸ್ವಲ್ಪ ಸಹೋದರ:-
ಸರೀ ಸ್ವಲ್ಪ ಸಹೋದರ ಮೋಡದ ಮರೆಯಿಂದ
ತೋರಣ್ಣ ನನ್ನ ಸುತನಿಗೆ ನಿನ್ನ ಆಂದ ಚಂದ
ಹಸಿದಿದೆ ಹೊಟ್ಟೆ ಹಾಗು ಕಣ್ಣು ನಿನ್ನ ಅಳಿಯನಿಗೆ
ತಡಮಾಡದೆ ಬಾ ನೀ ಮೋಡದಿಂದ ಹೊರಗೆ


ಎಷ್ಟು ಕೊಟ್ಟರೂ ಮುತ್ತ, ತಿನ್ನುತ್ತಿಲ್ಲ ಒಂದು ತುತ್ತ
ನಿನಗಾಗಿ ನೋಡುತ್ತಿದ್ದಾನೆ ಸುತ್ತಮುತ್ತ
ಅವನ ಕಣ್ಣಿನಲ್ಲಿ ಮೂಡಿದೆ ಕಂಬನಿ
ಮಸುಕು ಮಸುಕಾಗಿಯಾದರು ಕಾಣು ನೀ


ಹೊತ್ತು ಏರುತ್ತಾ ಬಂದಿದೆ ಬೇಗನೆ ತೇಲಿ ಬಾ
ಕಂದನ ದೃಷ್ಟಿತಾಗದು ನಿನಗೆ, ಅಂಜದೆ ಬಾ
ಅವನ ಅಸೆ ಮೇಲೆ ಮಸಿ ಮೆತ್ತದೆ ಬಾ
ನಿನ್ನ ತಂಗಿಯ ತನಯನ ಹರ್ಷಿಸಲು ಬಾ, ಆಶೀರ್ವದಿಸಲು ಬಾ.


                                                                        -ವೆ೦.ಪ.ತನಯ

1 comment:

viki said...

Great Kano Sharath...Nin Language tumbaa chennagide...Bhaava kooda sooper...Eegina makkalu Chandamaama nodi uta maadtaara?? i think they r happy with computers....great start kano...jaasthi janakke link kalsu...yaaru comment maadilla antha nange aascharya....
way to go VemPa Tanaya.
Nee moodu moodi bandaaga bari, naanu time-u koodi bandaaga comment maadteeni
Vikku