mood ಮೂಡಿ ಬಂದಾಗ

Friday, June 8, 2012

ಕನ್ನಡಿ:-




ಒರಗಿ ಒರಗಿ ಗೋಡೆಗೆ,
ಬೆನ್ನು ನೋವು ಬಂದಿದೆ. 
ನಿಂತೂ ನಿಂತೂ ದೇಹಕೆ,
ಜಡ ಅಪ್ಪಿ ಕೊಂಡಿದೆ.

ನನ್ನ ಒಡೆಯ ಸರಿಯಿಲ್ಲ,
ತಲೆಕೆಟ್ಟ ಹುಚ್ಚನು.
ಅಂಗಿ, ಭಂಗಿಯ ಬದಲಿಸಿ,
ನನ್ನ ಮುಂದೆ ನಿಲ್ಲುವನು.

ಅವನಲಿರೋ ದರ್ಪಣ ಬಿಟ್ಟು,
ನನ್ನ ನೋಡುತಾ ನಿಲ್ಲುವನು.
ಬಣ್ಣ ಬಣ್ಣ ಬಟ್ಟೆ ತೊಟ್ಟು,
ದರ್ಪದಿ ಹಿಗ್ಗುವನು..

ನನಗೂ ಒಬ್ಬ ಸಖಿಯಿದ್ದಾಳೆ,
ಹೇಳಲಾಗದ ಅಂದವು .
ನನ್ನ ಮುಂದಿರುತ್ತಾಳೇ,
ಅವಳ ಹೆಸರು ಬಿಂಬವು.

ಇದು ಒಂದು ಸತ್ಯ 
ಕಥೆ,
ಇದಕೆ ಬೇಕೆ ಮುನ್ನುಡಿ ?
ಹೇಳಬಹುದು ನಾನು ಇಷ್ಟೇ,
ನನ್ನ ಹೆಸರು "ಕನ್ನಡಿ".....

ವೆಂ.ಪ.ತನಯ

2 comments:

Paresh Saraf said...

ಕನ್ನಡಿಯ ಸ್ವಗತ ಸುಂದರ,, ವಿಭಿನ್ನ ಶೈಲಿ ನಿಮ್ಮದು.. ಬರೆಯುತ್ತಿರಿ.. ಶುಭವಾಗಲಿ :)

Unknown said...

ಧನ್ಯವಾದಗಳು...ಹಾಗೆ ತಮ್ಮ ಬ್ಲಾಗ್ ಓದಿ ಕುಷಿ ಆಯಿತು....ನಿಮ್ಮ "ದರ್ಮೋ ರಕ್ಷತಿ..." ತುಂಬ ಚನ್ನಾಗಿದೆ...ಒಂದು ಕ್ಷಣ ಕಣ್ಣುಗಳು ತೆವವಾದವು...ಅದ್ಬುತ ರಚನೆ.. ನಿರಂತರವಾಗಿ ಬರೆಯುತ್ತಿರಿ... :)